Awadheshwari by Shankar Mokashi Punekar, a Sahitya Akademi Award-winning title in Kannada, is a well researched political novel of the Vedic times, showcases the word-picture of the socio-political ethos of that time brilliantly. In particular, it centers around the fulcrum of the practice of niyoga, the practice, prevalent at the time, of legal adultery, of an infertile husband allowing his wife to beget progeny from another man. Through a host of plots and subplots, it tells the reader how the practice came to an end. In fact, the novel is listed one among the all-time best works of creative fiction in Kannada. This book is translated into all the 14 Indian languages by Sahitya Akademi.
ಇದೊಂದು ವೇದಕಾಲಿನ ರಾಜಕೀಯ ಕಾದಂಬರಿ... ಶ್ರೀರಾಮನ 42ನೆಯ ತಲೆಮಾರಿನ ಪೂರ್ವಜರು ಮುಖ್ಯ ಪಾತ್ರಗಳು... ಲೇಖಕರೇ ಹೇಳಿಕೊಂಡಿರುವಂತೆ ಇದನ್ನು ಒಂದು ಐತಿಹಾಸಿಕ ಘಟನೆಯಾಗಿ ನೋಡುವುದಕ್ಕಿಂತ ಒಂದು ಕಾದಂಬರಿಯಾಗಿ ನೋಡುಲು ಇಚ್ಛಿಸುತ್ತಾರೆ... ಆದರೆ ಇವರ ಶೋಧನೆ ಮತ್ತು ಅಧ್ಯಯನ ನಮ್ಮನ್ನು ನಿಜವಷ್ಟನ್ನೇ ಹೇಳುತ್ತಿದ್ದಾರೆ ಎಂಬಷ್ಟು ದ್ಯಾನಿಸುತ್ತದೆ.
ಇವರಿಗೆ ಸಿಕ್ಕಿರಬಹುದಾದ ದಾಖಲೆಗಳು ಮತ್ತು ಆಧಾರಗಳು ವಿಸ್ತರವಾಗಿತ್ತು ಅಂದರೆ ಇಲ್ಲ, ಸಿಕ್ಕ ಆಧಾರಗಳು ಅತ್ಯಲ್ಪ... ಹರಪ್ಪನ್ ಸೀಲುಗಳು ಮತ್ತು ಓಲ್ದೆಂಬರ್ಗ್ ಮತ್ತು ಗ್ರೀಫಿತ್ರ ಕೆಲ ಪುಸ್ತಕಗಳು.
ಇದು ಸುಳ್ಳೋ ನಿಜವೋ ನಮಗೆ ಅಪ್ರಸ್ತುತ, ನಾವು ವೇದಕಾಲಿನ ಜೀವನವನ್ನು, ಕುಲದರ್ಮವನ್ನು ತಿಳಿದು ಬೇರೆ ವಿಚಾರಗಳು ನಮಗೆ ಅಮುಖ್ಯವಾಗಬೇಕು... ಕೃತಿ ತಾಳ್ಮೆ ಮತ್ತು ಏಕಾಗ್ರತೆಯನ್ನು ಬೇಡುತ್ತದೆ.
ಇಲ್ಲಿ ಮನುಜ ತನ್ನ ಸಂಪತ್ತನ್ನು ಕಾಯ್ದಿರಿಸಿಕೊಳ್ಳಲು ಹಾಗೂ ಅಧಿಕಾರದ ಈರ್ಷ್ಯೆಗಾಗಿ, ಗಂಡು ಹೆಣ್ಣಿನ ಸಂಬಂಧದ ಮೊರೆ ಹೋಗುತ್ತಾನೆ, ಪ್ರಕೃತಿಯ ವಿರುದ್ದವೂ ಸಹ ಹೋಗುತ್ತಾನೆ, ಇಂತಹ ಘಟನೆಗಳು ಕೃತಿಯ ಉದ್ದಗಲಕ್ಕೂ ಬರುತ್ತವೆ
ಇಲ್ಲಿ ಲೇಖಕರು, ನಮ್ಮ ಯುಗದ ಸ್ತ್ರೀಶಕ್ತಿಯಾಗಿ ಪುರುಕುತ್ಸಾನಿಯಲ್ಲಿ ಆವಿಷ್ಕಾರಗೊಳ್ಳಿಸಿದ್ದಾರೆ. ಅದಕ್ಕೆ ಪುರುಕುತ್ಸನನ್ನು ದುರ್ಬಲನ್ನಾಗಿ ಮಾಡಿದ್ದಾರೆ.. ಆದರೆ ವೇದದಲ್ಲಿ ಅವರು ವೈಭವಿಕರಿಸಲ್ಪಟ್ಟಿದ್ದಾರೆ...ಈ ವಿಷಯವನ್ನು ಕೃತಿ ಸ್ವೀಕರಿಸೋದಿಲ್ಲ...ಲೇಖಕರೇ ಈ ಪ್ರಯತ್ನಕ್ಕೆ inward logic ಎಂದು ಹೆಸರಿಟ್ಟಿದ್ದಾರೆ...
ಖಂಡಿತ ಈ ಕೃತಿ ಕನ್ನಡದ ಕೆಲ ಉತ್ಕೃಷ್ಟ ಕೃತಿಗಳಲ್ಲಿ ಒಂದು....
ಅವಧೇಶ್ವರಿ ಶಂಕರ ಮೊಕಾಶಿ ಪುಣೇಕರ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿ
ಶ್ರೀರಾಮಚಂದ್ರನಿಗಿಂತ ೪೨ ಪೀಳಿಗೆಯ ಹಿಂದಿನ ಕಥೆ ಅವಧೇಶ್ವರಿ.
*ವೇದಕಾಲೀನ ರಾಜಕೀಯ ಕಾದಂಬರಿ ಅವಧೇಶ್ವರಿ. ಅಯೋಧ್ಯೆಯ ಮೂಲ ಹೆಸರು ಅವಧಪುರಿ. ಸಗರನೂ ಗೆಲ್ಲಲಾರದ ನಾಡಿಗೆ ಅಯೋಧ್ಯಾ ಎಂಬ ಗೌರವದ ಹೆಸರು ಬಂದಿತು. ಪಂಡಿತರು ಅಯೋಧ್ಯಾ ಮೂಲ ಹೆಸರೆಂದೂ ಅವಧ ಶಬ್ದದ ತದ್ಭವವೆಂದೂ ತಿಳಿದಿದ್ದಾರೆ. ಅವಧೇಶ್ವರಿಯೇ ರಾಣಿ ನರ್ಮದಾ ಪುರುಕುತ್ಸಾನಿ. ಮುಖ್ಯ ಪಾತ್ರಗಳು ಪುರುಕುತ್ಸ, ಪುರುಕುತ್ಸಾನಿ, ಪ್ರಸದಸ್ಯು, ತಾರ್ಕ್ಷ, ವೃಶಾಜನ, ಕಾಲಿಯಾ, ಶಂಬರಾಸುರ, ಸಿಂಹಭಟ್ಟ.*
ಭಾಗ-೧ : ಪುರುಕುತ್ಸ: ಸೂರ್ಯವಂಶದ ಪದ್ಧತಿಯಂತೆ ಪುರುಕುತ್ಸ ತನ್ನ ತಂಗಿಯಾದ ಪುರುಕುತ್ಸಾನಿಯನ್ನೇ ಮದುವೆಯಾದನು ಇವರಿಬ್ಬರು ರಾಜ ಮಾಂಧಾತನ ಮಕ್ಕಳು, ಇದು ರಾಜಮನೆತನದಲ್ಲಿ ಹೊರಗಿನವರು ಬಾರದಂತೆ ಮಾಡುವ ವ್ಯವಸ್ತೆ ಹಾಗು ಇಜಿಪ್ಶಿಯನ್ ರಾಜಮನೆತನದಲ್ಲಿ ನಡೆದುಬಂದ ರೀತಿ, ಆದರೆ ಇವರಿಬ್ಬರಿಗೆ ಮಕ್ಕಳಾಗಲಿಲ್ಲ. ರಾಜ ಪುರುಕುತ್ಸನಾದರು ರಾಜ್ಯದ ಆಡಳಿತವೆಲ್ಲವನ್ನೂ ನೋಡಿಕೊಳ್ಳುತ್ತಿದ್ದುದು ಪುರುಕುತ್ಸಾನಿಯೇ, ಆಕೆಯ ನಿರ್ಧಾರಗಳಿಂದ, ಮುಂದಾಲೋಚನೆಯಿಂದ ಅಯೋಧ್ಯೆಯನ್ನು ಇತರರು ಆಕ್ರಮಣ ಮಾಡುವುದನ್ನು ಹಲವಾರು ಬಾರಿ ತಪ್ಪಿಸಿದ್ದಳು. ತಾರ್ಕ್ಷ ಪುರುಕುತ್ಸನಿಗೆ ಗಣಿಕೆಯರನ್ನು ಒದಗಿಸುತ್ತಿರುತ್ತಾನೆ, ಆದರೆ ಅವನ ಪಾತ್ರ ಕಾದಂಬರಿಯಲ್ಲಿ ಮಹತ್ವಪೂರ್ಣವಾದದ್ದು, ಆತನು ಯೋಧ, ರಾಣಿಯ ಮಾತಿಗೆ ಮರುಮಾತನಾಡದೆ ಆಕೆಯ ಆಜ್ಞೆಯನ್ನು ಪಾಲಿಸುತ್ತಿದ್ದನು, ಚತುರ ಸೇನಾನಿ, ನಂತರ ರಾಣಿಯ ಮಗನಾದ ತ್ರಸದಸ್ಯುವಿಗೆ ಗುರುವಾಗುತ್ತಾನೆ.
ಒಮ್ಮೆ *ಗಂಡಕಿನದಿಯ ತೀರದ ಭಿಲ್ಲರು* ಶ್ರಾವಸ್ತಿಯ ಮೇಲೆ ಹಲ್ಲೆ ಮಾಡಿ ಕೊಲೆ ಸುಲಿಗೆ ದರೋಡೆಗಳನ್ನು ಮಾಡತೊಡಗಿದರು, *ಶ್ರಾವಸ್ತಿಗೆ ಬಂದರೆ ಅಯೋಧ್ಯೆಗೂ ಭಿಲ್ಲರು ದಾಳಿಮಾಡಬಹುದೆಂದು ಯೋಚಿಸಿ ರಾಣಿ ಪುರುಕುತ್ಸಾನಿ ೫೦೦ ಪಡೆಯನ್ನು ತಾನಾಗಿಯೇ ಶ್ರಾವಸ್ತಿಯ ಸುಭಾನುವಿನ ನೆರವಿಗೆ ಕಳುಹಿಸಿ ಅವರ ಜೊತೆ ಮೈತ್ರಿ ಬೆಳೆಸಿಕೊಂಡಲು*. ಭಿಲ್ಲರ ಆಕ್ರಮಣ ಕಾರಣ ಶ್ರಾವಸ್ತಿಯ ಅರಸರು ಪ್ರತಿ ವಿಜಯ ದಶಮಿಯಂದು ಭಿಲ್ಲರನ್ನು ಬೇಟೆಯಾಡಿ, ಹೆಂಗಸರನ್ನು ಎತ್ತಿಕೊಂಡು ಹೋಗುತ್ತಾರೆಂದು ಭಿಲ್ಲರ ರಾಜ ಉಪೇಂದ್ರ ಪುರುಕುತ್ಸಾನಿಯ ಬಳಿ ವಿವರಿಸುತ್ತಾನೆ. ಅಯೋಧ್ಯೆಯ ದೃಷ್ಟಿಯಿಂದ ಭಿಲ್ಲರನ್ನು ಒಲಿಸಿಕೊಳ್ಳಲು ೧೪ ಗುಂಪು ಮಾಡಿ, ಆಕೆ ಹೇಳಿದ ಅಡವಿಯಲ್ಲಿ ಕುಟುಂಬ ಸಮೇತ ವಾಸಿಸಲು ನೆರವಾಗಿ, ಜೇನು ಸಾಕಿ, ಹಣ್ಣು ಮಾರಿ, ಜೀವನ ಸಾಗಿಸಬೇಕೆಂದು, ಕೊಲೆ ಸುಲಿಗೆ ಬಿಟ್ಟು ಬಿಡಬೇಕೆಂದು, ರಾಜಾಜ್ಞೆಯಾದಾಗ ಯುದ್ಧಕ್ಕೆ ಬರಬೇಕೆಂದು ಶರತ್ತು ಹಾಕುತ್ತಾಳೆ. ಶ್ರಾವಸ್ತಿಯವರಿಂದ ತಪ್ಪಿಸಿಕೊಳ್ಳುಲು ಬಿಲ್ಲರು ರಾಣಿಯ ಮಾತಿಗೆ ಒಪ್ಪುತ್ತಾರೆ. ಅತ್ತ ಶ್ರಾವಸ್ತಿಯವರ ಜೊತೆ ಮೈತ್ರಿ, ಬಿಲ್ಲರ ಜೊತೆ ಮೈತ್ರಿ ಬೆಳೆಸುತ್ತಾಳೆ. ಒಮ್ಮೆ ಪುರುಕುತ್ಸನ ಆರೋಗ್ಯ ಕೆಟ್ಟಾಗ ದೇವದೇಮರ ಹಾಗು ಸಿಂಹಭಟ್ಟರ ನೇತೃತ್ವದಲ್ಲಿ ಶತಚಂಡಿಯಾಗವನ್ನು ನೆರವೆೇರಿಸುತ್ತಾಳೆ, ಇದರಿಂದ ರಾಜನು ಚೇತರಿಸಿಕೊಳ್ಳುತ್ತಾನೆ.
ಭಾಗ -೨ : ಭದ್ರಾಯು: ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು, ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ, ಆಕೆಗೆ ಮಕ್ಕಳಾಗಲಿಲ್ಲವೆಂದು ಅನಾಥ ಬಾಲಿಕೆ ಯಾದವಿಯನ್ನು ಮದುವೆಯಾಗುತ್ತಾನೆ. ಯಾದವಿ ಗರ್ಭವತಿಯಾದಾಗ ಕೇಶಿನಿ ಆಕೆಗೆ ವಿಷಪ್ರಾಸನ ಮಾಡುತ್ತಾಳೆ, ಋಷಭದೇವ ಮಹಾಮುನಿಗಳ ಔಷಧದಿಂದ ಅದೃಷ್ಟವಶಾತ್ ಗರ್ಭಪಾತದಿಂದ ಯಾದವಿ ಪಾರಾಗುತ್ತಾಳೆ ಆದರೆ ಹುಟ್ಟಿದ ಶಿಶುವಿಗೆ ಕೈಗಳಿಲ್ಲ, ಪಾದಗಳಿಲ್ಲ, ಕೈ ಇರುವ ಜಾಗದಲ್ಲಿ ಒಂದೇ ಗಣಲಿನ ಭುಜವಿರುತ್ತದೆ, ಊನ ಶಿಶು ಕಂಡು ಯಾದವಿ ಸಾಯಲು ಸಿದ್ಧಳಾಗುತ್ತಾಳೆ, ಆದರೆ ಋಷಭದೇವನು ಶಿಶುವಿನ ಜಾತಕ ನೋಡಿ ಚಕ್ರವರ್ತಿಯಾಗುತ್ತಾನೆಂದು ಹೇಳಿದಾಗ ಸಮಾಧಾನವಾಗುತ್ತದೆ. ಕೇಶಿನಿ ರಾಜ್ಯಾಡಳಿತ ಮಾಡುವುದನ್ನು ಆಕೆಯ ತಮ್ಮ ದುರ್ಗಸಿಂಹ ಸಹಿಸಲಾರ ಸೇಡು ತೀರಿಸಿಕೊಳ್ಳಲು ಕಾಯುತ್ತಾನೆ. ಇದೇ ಸಮಯದಲ್ಲಿ ಶಬರರು ದಾಶಾರ್ಣದ ಮೇಲೆ ದಾಳಿ ಮಾಡುತ್ತಾರೆ, ಅವರ ಪಡೆಗೆ ದುರ್ಗಸಿಂಹ ಸೇರುತ್ತಾನೆ. ಕೇಶಿನೀದೇವಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಪರಾರಿಯಾಗುತ್ತಾಳೆ, ಆದರೆ ಭದ್ರಾಯು ಪಾಂಚಾಲ ರಾಜ್ಯದ ಮೇಲೆ ದಾಳಿ ಮಾಡಿ ಆಕ್ರಮಿಸಿ ಕುರುಪಾಂಚಾಲ ಸಾಮ್ರಾಜ್ಯವನ್ನು ಕಟ್ಟಿ ಮಾಹಿಷ್ಮತಿಯನ್ನು ಆಕ್ರಮಣ ಮಾಡುತ್ತಾನೆ. ಭದ್ರಾಯುವೆ ನಂತರ *ಸಗರ* ಎಂದು ಪ್ರಸಿದ್ಧಿ ಹೊಂದುತ್ತಾನೆ. *ನಂತರ ಸಗರನ ಕಣ್ಣು ಅಯೋಧ್ಯೆಯ ಮೇಲೆ ಬೀಳುತ್ತದೆ, ಅಯೋಧ್ಯೆಯನ್ನು ಆಕ್ರಮಣ ಮಾಡಲು ಹೊರಟ ಶಬರರು ಪುರುಕುತ್ಸಾನಿಯ, ತಾರ್ಕ್ಷನ ಚಾಣಾಕ್ಷತೆಯಿಂದ ಅಯೋಧ್ಯೆಯನ್ನು ಗೆಲ್ಲಲಾರದೆ ಪುರುಕುತ್ಸನಿದ್ದ ಆಮ್ರವನಕ್ಕೆ ಮುತ್ತಿಗೆ ಹಾಕಿ ಪುರುಕುತ್ಸನನ್ನು ಅಪಹರಿಸಿಕೊಂಡು ಹೋಗುತ್ತಾರೆ. ಅಯೋಧ್ಯೆಯನ್ನು ಗೆಲ್ಲದಿದ್ದರೂ ರಾಜನನ್ನು ಬಂಧಿಸಿದಷ್ಟೇ ಸಗರನಿಗೆ ಸಮಾಧಾನ.*
ಭಾಗ-೩: ತ್ರಸದಸ್ಯು ಪುರುಕುತ್ಸನಿಂದ ಸಂತಾನ ಪ್ರಾಪ್ತವಾಗದೆ ಪುರುಕುತ್ಸಾನಿ ಶತಚಂಡಿಯಾಗದ ಸಮಯದಲ್ಲಿ ಸಿಂಹಭಟ್ಟನ ರೂಪ ಲಾವಣ್ಯಗಳಿಗೆ ಮಾರುಹೋಗಿ ಆತನಿಂದ ಸುಖ ಪಡೆದು ಗರ್ಭವತಿಯಾಗಿ ತ್ರಸದಸ್ಯುವಿಗೆ ಜನ್ಮ ನೀಡುತ್ತಾಳೆ, ಆದರೆ ಇದು ಗುಟ್ಟಾಗಿರುತ್ತದೆ, ತ್ರಸದಸ್ಯು ಪುರುಕುತ್ಸನ ಮಗನೆಂದೆ ಆತನು ಪಟ್ಟಕ್ಕೇರುತ್ತಾನೆ. ತಾರ್ಕ್ಷನಿಂದಲೇ ತ್ರಸದಸ್ಯು ಹಲವಾರು ವಿದ್ಯೆಗಳನ್ನು ಕಲಿತುಕೊಳ್ಳುತ್ತಾನೆ, ತಾರ್ಕ್ಷನೆ ಗುರುವಾಗುತ್ತಾನೆ. ಇದೇ ಸಮಯದಲ್ಲಿ ಪಶ್ಚಿಮದತ್ತ ಲಕ್ಷಕೊಟ್ಟ ರಾಣಿಯು ಪೂರ್ವದಿಂದ ಕಾಶೀರಾಜನು ಅಯೋಧ್ಯೆಯನ್ನು ಮುತ್ತಿಗೆ ಹಾಕಲು ಬರುವುದನ್ನು ತಿಳಿದು ಭಿಲ್ಲರ ನಾಯಕ ಕಾಲಿಯನ ನೇತೃತ್ವದಲ್ಲಿ ಉತ್ತರ ಕೋಸಲದಿಂದ ಕಾಶೀರಾಜನನ್ನು ತಡೆಗಟ್ಟಳು ಆಜ್ಞೆ ಮಾಡಿ ಹಾಗು ತಾರ್ಕ್ಷನ ನೇತೃತ್ವದಲ್ಲಿ ಕಾಶೀರಾಜನನ್ನು ತಡೆದು ಕಾಶಿ ಸೈನ್ಯವನ್ನು ಹಿಮ್ಮೆಟ್ಟಿಸಿದ ಪ್ರಸಂಗ ಅತ್ಯದ್ಭುತ. ಸಗರನು ಮರಣಾನಂತರ ರುಕ್ಮಾಂಗದ ಪಟ್ಟಕ್ಕೆ ಬರುತ್ತಾನೆ, ಆದರೆ ಅಯೋಧ್ಯೆ ಕಾಶಿ ಶ್ರಾವಸ್ತಿಗಳನ್ನು ಸೋಲಿಸಿದ ಸುದ್ಧಿ ಅರಗಿಸಿಕೊಳ್ಳಲಾಗಲಿಲ್ಲ. ಅಂತೂ ಪುರುಕುತ್ಸಾನಿಯ ಚಾಣಾಕ್ಷತೆಯಿಂದ ಅಯೋಧ್ಯೆಯನ್ನು ರುಕ್ಮಾಂಗದನಿಂದ ಹಾಗು ನೇಪಾಳ ರಾಜ ತ್ರಿಲೋಕಸಿಂಹನಿಂದ ಪಾರುಮಾಡುವ ಪ್ರಸಂಗವೂ ಅತ್ಯದ್ಭುತ. ಒಟ್ಟಾರೆ ಶ್ರಾವಸ್ತಿ, ಗಯಾ, ಕಾಶಿ, ಕಾಮಾಖ್ಯ ಇವರುಗಳ ಜೊತೆ ಸ್ನೇಹದಿಂದಿರುತ್ತಾಳೆ. ರುಕ್ಮಾಂಗದ ವಿವಾಹ ಸಮಯದಲ್ಲಿ ಪುರುಕುತ್ಸನನ್ನು ಕಳ್ಳನು ಚೂರಿಯಿಂದ ಕೊಲ್ಲುತ್ತಾನೆ, ಆ ಕಳ್ಳನಾರೆಂದು ನಂತರ ಭಾಗದಲ್ಲಿ ತಿಳಿದಾಗ ಆಶ್ಚರ್ಯವಾಗುತ್ತದೆ.
ತ್ರಸದಸ್ಯು ೧೯ ವರ್ಷದವನಿದ್ದಾಗ ರಾಣಿ ಆಮ್ರವನವನ್ನು ಸೇರುತ್ತಾಳೆ. ಚಿಕ್ಕ ಬಾಲಕನ ಮೇಲೆ ವೃಷಭಟ್ಟ ರಥ ಓಡಿಸಿದರಿಂದ ರಥ ಒಡಿಸಲು ಕೊಟ್ಟ ತ್ರಸದಸ್ಯು ಹಾಗು ವೃಷಭಟ್ಟರಲ್ಲಿ ದ್ವೇಷ ಅಸೂಹೆ ಬೆಳೆದು, ನ್ಯಾಯ ಒದಗಿಸಿಕೊಡಲು ಕಾಶಿಯಿಂದ ಕೇ��ುಮಂತ ಬಂದು ತ್ರಸದಸ್ಯುವಿಗೆ ನ್ಯಾಯ ಒದಗಿಸುತ್ತಾನೆ. ವೃಷಭಟ್ಟನಿಗೆ ತ್ರಸದಸ್ಯು ಸಿಂಹಭಟ್ಟನ ಮಗನೆಂದು ತಿಳಿದಿರುತ್ತದೆ. ಈ ಸುದ್ಧಿ ವೃಷಭಟ್ಟನಿಂದ ತನ್ನ ತಂದೆ ಭೀಮಭಟ್ಟನಿಗೆ ತಿಳಿದು ಜನರ ನಿಂದನೆಗಳಿಗೆ ತ್ರಸದಸ್ಯು ಪಾತ್ರನಾಗುತ್ತಾನೆ. ಅವರ ನಿಂದನೆಯಿಂದ ಹಾಗು ಕೇತುಮಂತನು ನ್ಯಾಯ ಒದಗಿಸಿ ಪಾರಾಗುವುದೇ ಇತರ ಅಧ್ಯಾಯದ ಕಥೆ.
ನ್ಯಾಯ ಒದಗಿಸಿ ಕಾಶಿಗೆ ಹೊರಟ ಕೇತುಮಂತ ತನ್ನ ತಮ್ಮನಾದ ದಿವೋದಾಸನಿಂದ ಸೆರೆಯಾಗುತ್ತಾನೆ. ಒಂದು ಕಡೆ ಹೈಹೇಯ ಪಡೆಯು ಕಾಶಿಯನ್ನು ಮುತ್ತಿಗೆ ಹಾಕಲು ಹೊರಟಿರುತ್ತಾರೆ, ಮತ್ತೊಂದು ಕಡೆ ದಿವೋದಾಸ ಅಯೋಧ್ಯೆಯನ್ನು ಮುತ್ತಿಗೆ ಹಾಕಲು ಹೊರಡುತ್ತಾರೆ. ಇದನ್ನು ತಿಳಿದ ತಾರ್ಕ್ಷ, ತ್ರಸದಸ್ಯು ಬಹಳ ಚಾಣಾಕ್ಷತೆಯಿಂದ ಕಾಲಿಯ ಸೈನ್ಯದಿಂದ, ಶ್ರಾವಸ್ತಿಯ ಸೈನ್ಯದಿಂದ, ತಮ್ಮ ಸೈನ್ಯದಿಂದ ದಿವೋದಾಸನನ್ನು ಹೇಹೇಯರನ್ನು ಸೋಲಿಸಿ ಕೇತುಮಂತನನ್ನು ಬಿಡಿಸಿ ಅಯೋಧ್ಯೆಯನ್ನು ಕಾಪಾಡಿಕೊಳ್ಳುವುದು ರೋಚಕವಾಗಿದೆ.
ತಾರ್ಕ್ಷ: ತನಗೂ ಅಯೋಧ್ಯೆಗೂ ಏನು ಸಂಬಂಧ? ತಾನು ಖಾಸಿ ಗುಡ್ಡದ ಹುಡುಗನಾಗಿದ್ದೆ, ಮಾಂಧಾತ ರಾಜನು ಅಡವಿಯಲ್ಲಿ ದಾರಿ ತೋರಿ ಪ್ರಾಗ್ಜೋತಿಷ ನಗರಕ್ಕೆ ಒಯ್ದು ಅಲ್ಲಿಂದ ಅಯೋಧ್ಯೆಗೆ ಕರೆತಂದು ಅರಮನೆಯ ಗುಲಾಮನಾಗಿ ಬೆಳಸಿದ. ನಂತರ ಮಾಂಧಾತನ ನೆಚ್ಚಿನ ಸಾರಥಿಯಾದೆ. ಶಂಬರಾಸುರ ತಾತನಿಂದ ಗುಪ್ತ ವಿದ್ಯೆಗಳನ್ನು ಕಲಿತೆ, ನಂತರ ಪುರುಕುತ್ಸನಿಗೆ ಹೆಣ್ಣು ಒದಗಿಸಿಕೊಡುವ ಕೆಲಸ ಮಾಡುತ್ತಿದ್ದೆ. ಮಾಂಧಾತನ ಮಗಳಾದ ಪುರುಕುತ್ಸಾನಿಯಲ್ಲಿ ಮಾಂಧಾತನ ಅಂಶ ಕಂಡೆ, ಆಕೆಯ ಆಜ್ಞೆಯನ್ನು ಪಾಲಿಸುತ್ತಿದ್ದೆ, ರಾಣಿ ನನ್ನಿಂದ ನಿಷ್ಟ ಸೇವೆ ಪಡೆದಳು, ರಾಣಿಗೆ ಗೊತ್ತಿಲ್ಲವಾದರೂ ಆಕೆಯ ಪತಿ ಪುರುಕುತ್ಸನನ್ನು ಸಂಹರಿಸಿದ ಕಳ್ಳನು, ತಾನೆ ಆಕೆಯ ಹಾಸಿಗೆಯ ಮೇಲೆಸ್ಥಾನ ದಕ್ಕಿಸಿ ಆಕೆಗೆ ಸುಖಕೊಟ್ಟೆ, ಇದು ನೊಂದುಕೊಳ್ಳುವ ವಿಷಯವೇ, ತ್ರಸದಸ್ಯುವಿಗೆ ಗುರುವಾದೆ, ತ್ರಸದಸ್ಯುವು ದಿವೋದಾಸನ ಸೆರೆಯಾದಾಗ ಆತನನ್ನು ಪಾರುಮಾಡಿದ್ದೆ, ಇಷ್ಟೆಲ್ಲಾ ಏತಕ್ಕೆ ಮಾಡಿದೆನೋ ನಾನರಿಯೇ , ಹೀಗೆ ತಾರ್ಕ್ಷನು ಒಮ್ಮೆ ತನ್ನ ಜೀವನದಲ್ಲಿ ನಡೆದ ಸಂಗತಿಗಳನ್ನು ತಿರುವಿಹಾಕುತ್ತಾನೆ.
ಅವಧೇಶ್ವರಿ ಒಂದು ಪೌರಾಣಿಕ / ಐತಿಹಾಸಿಕ ಕಾದಂಬರಿ. ಇದು ಶ್ರೀರಾಮಚಂದ್ರನ 42ನೇ ತಲೆಮಾರಿನ ಪೂರ್ವಜರ ಕಥೆ. ಇದರಲ್ಲಿ ವೇದಕಾಲೀನ ಸಂಪ್ರದಾಯಗಳ ಭಾಷೆಗಳ ನಂಬಿಕೆಗಳ ನೈಜ ಚಿತ್ರಣವಿದೆ. ಈ ಕಥೆ ರಾಜಕುಟುಂಬದ ಸುತ್ತ ಹೆಣೆೆಯಲ್ಪಟಿದ್ದು ಇದರಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯಗಳು, ರಾಜಕೀಯ ಷಡ್ಯಂತ್ರಗಳು ಹಾಗೂ ಯುದ್ಧದ ತಾಂತ್ರಿಕತೆಗಳ ಅಂಶಗಳಿವೆ. ಹಿಂದೆ ಹೀಗೆ ಇತ್ತ ? ಎಂದು ನಮ್ಮಲ್ಲಿರುವ ಪ್ರಶ್ನೆಗೆ ಅಲ್ಲಲ್ಲಿ ತೃಪ್ತಿಕರವಾದ ಟಿಪ್ಪಣಿಗಳನ್ನು ಲೇಖಕರು ಉಲ್ಲೇಖಿಸುತ್ತಾರೆ.
ಇದರಲ್ಲಿ ಬರುವ ಪುರುಕುತ್ಸನಿ (ರಾಣಿಯ) ಪಾತ್ರ ನಾನು ಓದಿದ ಕನ್ನಡದ ಕಾದಂಬರಿಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಮೂಡಿ ಬಂದಿರುವ ಪಾತ್ರ. ಕಥೆ ಎಲ್ಲಿಯೂ ದಾರಿ ತಪ್ಪದಂತೆ ಹಿಡಿದು ನಡೆಸುವ ಕೆಲಸವನ್ನು ಮತ್ತೊಂದು ಪಾತ್ರ ವಾದ ತಾರ್ಕ್ಷ ಮಾಡುತ್ತಾನೆ.ಅಷ್ಟು ಸಹಸ್ರ ವರ್ಷಗಳ ಹಿಂದಿನ ಕಥೆಯಾದರೂ ನನಗೆ ಅಚ್ಚರಿ ಮೂಡಿಸಿದ ವಿಷಯವೇನೆಂದರೆ ಮನುಷ್ಯನ ಮನೋಧರ್ಮದಲ್ಲಿ ಗಮನಾರ್ಹ ಬದಲಾವಣೆ ಕಾಣುವುದಿಲ್ಲ. ಇಂದಿಗೂ ಈ ಕಾದಂಬರಿ ಸಾಮಾಜಿಕವಾಗಿ ರಾಜಕೀಯವಾಗಿ ಅಷ್ಟೇ ಮಹತ್ವದ ಪಾತ್ರವಹಿಸುತ್ತದೆ.
ಕಥೆಯ ಹೊರತಾಗಿ ಇದರಲ್ಲಿ ಬರುವ ಭಾಷೆಗಳ ವೈವಿಧ್ಯ ಅದರ ಉಚ್ಚಾರಣೆ (ಆಕ್ಸೆಂಟ್) ಗೆ ಕೊಡುವ ಪ್ರಾಮುಖ್ಯ, ವೇದಗಳ ಉಲ್ಲೇಖ ಇದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಮೂಡಿಸುತ್ತದೆ. ಹೆಚ್ಚಾಗಿ ಸಂಸ್ಕೃತ ಪದಗಳ ಬಳಕೆ ಇರುವುದರಿಂದ, ಅದರ ಅರ್ಥಕೋಶ ಹಾಗೂ ಅಲ್ಲಲ್ಲಿ ಬರುವ ವೇದಗಳ ಸವಿವರ ಅರ್ಥದ ಟಿಪ್ಪಣಿ ನೀಡಿದ್ದರೆ ಓದುಇನ್ನಷ್ಟು ಸುಲಭವಾಗಿ ಇರುತ್ತಿತ್ತೇನೋ. ಆದರೂ ಕೊನೆಯ ಉಪಸಂಹಾರ ಓದುವಾಗ ಯಾವ ಪಾತ್ರಗಳೂ ಕಾಲ್ಪನಿಕ ಎಂದು ನಮಗೆ ಅನಿಸುವುದಿಲ್ಲ. ಲೇಖಕರು ಕಾದಂಬರಿ ಎಂದು ಹೇಳಿರುವ ಕಾರಣಕ್ಕೆ ಇದೊಂದು ಕಾದಂಬರಿ ಇಲ್ಲವಾದರೆ ಚರಿತ್ರೆಯಾಗಿದರುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
Avadheshwari was a very interesting read. It did get a little slow in the middle, maybe because I felt there were too many details, names, subtexts, and subplots. It all got tangled in my head and it took me a while of going back and forth to figure out who was who and what was what. But when I got the last 50 pages or so of the book, it all seemed worth it.
The book is set in Ayodhya during Vedic times, 42 generations before the Ramayana. The central theme is “niyoga” (you will know what it is if you’re familiar with the Mahabharata). The story starts with the incestuous marriage between Princess Purukutsani and her brother Purukutsa, as decided by their father the King Mandhata, in order to preserve their pure royal blood. They fail to live as a married couple and the philandering Purukutsa gets captured by a neighbouring rival kingdom. In order to have an heir, Purukutsani secretly performs “niyoga” with Simhabhatta, a Brahmin priest. Prince Trasadasyu is born as a result. The consequences of this secret, the turmoil Trasadasyu goes through when he hears rumours of his origin and how he goes on to become the “half-God” king later in his life forms the second half of the book.
Purukutsani comes across as a strong queen, clever and much more well-versed in politics, war tactics and governance than her brother/husband Purukutsa. She has a level head, but for some reason fails to get out of her self-declared “distasteful” relationship with Simhabhatta. Maybe I need to read the book again to understand that part.
What fascinated me about the book apart from the story is that the author is a strong non-believer of the Aryan invasion theory, and has made references to real Mohenjo Daro seals and inscriptions that mention King Trasadasyu. After having learnt throughout my school days about the Aryan invasion and the Aryan-Dravidian divide, which never sat well with me, I really like this theory of our Vedic civilization originating from our own land, it intrigues me, and I want to soak up every book there is on this subject. This book, although a complicated fictionalized novel, fulfils that fascination to some extent.
Avadheshwari has been translated to 14 languages, so if you’re interested in our ancient, ancient history/puranas but haven’t read it yet, find one in a language you like and go read it!
ವೇದಕಾಲದ ಘಟನೆಗಳನ್ನ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದಾರೆ. ವಾಸ್ತವವೂ ಅದಕ್ಕೆ ಒಂದಷ್ಟು ಕಲ್ಪನೆಯೂ ಸೇರಿದ ಕಾದಂಬರಿ. ಓದಿ ಮುಗಿದ ನಂತರ ಕಾದಂಬರಿ ಎನ್ನಬೇಕೋ ಸಂಶೋಧನೆ ಗ್ರಂಥ ಎನ್ನಬೇಕೋ ಎಂಬುದು ಗೊಂದಲವಾಗುತ್ತದೆ. ಆದರೆ ಲೇಖಕರು ಇದನ್ನು ಕಾದಂಬರಿ ಎಂದೇ ಪರಿಗಣಿಸಬೇಕು ಎಂದಿದ್ದಾರೆ!
ವೇದ ಕಾಲದ ಕಾದಂಬರಿ, ಒಂದು ಅಧ್ಭುತ ಪ್ರಪಂಚ ನಮ್ಮ ಮುಂದೆ ತೆರೆದಿಡುತ್ತದೆ. ಐತಿಹಾಸಿಕ ಘಟನೆಗಳಿಂದ ಪ್ರೇರಣೆಗೊಂಡು, ನೀಜವೆ ಎನ್ನುವಷ್ಟು ಮಟ್ಟಿಗೆ ಕಾದಂಬರಿ ಮೂಡಿ ಬಂದಿದೆ. ಕನ್ನಡದ ಅಪರೂಪದ ಕಾದಂಬರಿಗಳಲ್ಲಿ ಅವಧೇಶ್ವರಿ ಕೂಡ ಒಂದು.
ಅವಧೇಶ್ವರಿ ಶಂಕರ ಮೊಕಾಶಿ ಪುಣೇಕರ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿ
ಶ್ರೀರಾಮಚಂದ್ರನಿಗಿಂತ ೪೨ ಪೀಳಿಗೆಯ ಹಿಂದಿನ ಕಥೆ ಅವಧೇಶ್ವರಿ.
*ವೇದಕಾಲೀನ ರಾಜಕೀಯ ಕಾದಂಬರಿ ಅವಧೇಶ್ವರಿ. ಅಯೋಧ್ಯೆಯ ಮೂಲ ಹೆಸರು ಅವಧಪುರಿ. ಸಗರನೂ ಗೆಲ್ಲಲಾರದ ನಾಡಿಗೆ ಅಯೋಧ್ಯಾ ಎಂಬ ಗೌರವದ ಹೆಸರು ಬಂದಿತು. ಪಂಡಿತರು ಅಯೋಧ್ಯಾ ಮೂಲ ಹೆಸರೆಂದೂ ಅವಧ ಶಬ್ದದ ತದ್ಭವವೆಂದೂ ತಿಳಿದಿದ್ದಾರೆ. ಅವಧೇಶ್ವರಿಯೇ ರಾಣಿ ನರ್ಮದಾ ಪುರುಕುತ್ಸಾನಿ. ಮುಖ್ಯ ಪಾತ್ರಗಳು ಪುರುಕುತ್ಸ, ಪುರುಕುತ್ಸಾನಿ, ಪ್ರಸದಸ್ಯು, ತಾರ್ಕ್ಷ, ವೃಶಾಜನ, ಕಾಲಿಯಾ, ಶಂಬರಾಸುರ, ಸಿಂಹಭಟ್ಟ.*
ಭಾಗ-೧ : ಪುರುಕುತ್ಸ: ಸೂರ್ಯವಂಶದ ಪದ್ಧತಿಯಂತೆ ಪುರುಕುತ್ಸ ತನ್ನ ತಂಗಿಯಾದ ಪುರುಕುತ್ಸಾನಿಯನ್ನೇ ಮದುವೆಯಾದನು ಇವರಿಬ್ಬರು ರಾಜ ಮಾಂಧಾತನ ಮಕ್ಕಳು, ಇದು ರಾಜಮನೆತನದಲ್ಲಿ ಹೊರಗಿನವರು ಬಾರದಂತೆ ಮಾಡುವ ವ್ಯವಸ್ತೆ ಹಾಗು ಇಜಿಪ್ಶಿಯನ್ ರಾಜಮನೆತನದಲ್ಲಿ ನಡೆದುಬಂದ ರೀತಿ, ಆದರೆ ಇವರಿಬ್ಬರಿಗೆ ಮಕ್ಕಳಾಗಲಿಲ್ಲ. ರಾಜ ಪುರುಕುತ್ಸನಾದರು ರಾಜ್ಯದ ಆಡಳಿತವೆಲ್ಲವನ್ನೂ ನೋಡಿಕೊಳ್ಳುತ್ತಿದ್ದುದು ಪುರುಕುತ್ಸಾನಿಯೇ, ಆಕೆಯ ನಿರ್ಧಾರಗಳಿಂದ, ಮುಂದಾಲೋಚನೆಯಿಂದ ಅಯೋಧ್ಯೆಯನ್ನು ಇತರರು ಆಕ್ರಮಣ ಮಾಡುವುದನ್ನು ಹಲವಾರು ಬಾರಿ ತಪ್ಪಿಸಿದ್ದಳು. ತಾರ್ಕ್ಷ ಪುರುಕುತ್ಸನಿಗೆ ಗಣಿಕೆಯರನ್ನು ಒದಗಿಸುತ್ತಿರುತ್ತಾನೆ, ಆದರೆ ಅವನ ಪಾತ್ರ ಕಾದಂಬರಿಯಲ್ಲಿ ಮಹತ್ವಪೂರ್ಣವಾದದ್ದು, ಆತನು ಯೋಧ, ರಾಣಿಯ ಮಾತಿಗೆ ಮರುಮಾತನಾಡದೆ ಆಕೆಯ ಆಜ್ಞೆಯನ್ನು ಪಾಲಿಸುತ್ತಿದ್ದನು, ಚತುರ ಸೇನಾನಿ, ನಂತರ ರಾಣಿಯ ಮಗನಾದ ತ್ರಸದಸ್ಯುವಿಗೆ ಗುರುವಾಗುತ್ತಾನೆ.
ಒಮ್ಮೆ *ಗಂಡಕಿನದಿಯ ತೀರದ ಭಿಲ್ಲರು* ಶ್ರಾವಸ್ತಿಯ ಮೇಲೆ ಹಲ್ಲೆ ಮಾಡಿ ಕೊಲೆ ಸುಲಿಗೆ ದರೋಡೆಗಳನ್ನು ಮಾಡತೊಡಗಿದರು, *ಶ್ರಾವಸ್ತಿಗೆ ಬಂದರೆ ಅಯೋಧ್ಯೆಗೂ ಭಿಲ್ಲರು ದಾಳಿಮಾಡಬಹುದೆಂದು ಯೋಚಿಸಿ ರಾಣಿ ಪುರುಕುತ್ಸಾನಿ ೫೦೦ ಪಡೆಯನ್ನು ತಾನಾಗಿಯೇ ಶ್ರಾವಸ್ತಿಯ ಸುಭಾನುವಿನ ನೆರವಿಗೆ ಕಳುಹಿಸಿ ಅವರ ಜೊತೆ ಮೈತ್ರಿ ಬೆಳೆಸಿಕೊಂಡಲು*. ಭಿಲ್ಲರ ಆಕ್ರಮಣ ಕಾರಣ ಶ್ರಾವಸ್ತಿಯ ಅರಸರು ಪ್ರತಿ ವಿಜಯ ದಶಮಿಯಂದು ಭಿಲ್ಲರನ್ನು ಬೇಟೆಯಾಡಿ, ಹೆಂಗಸರನ್ನ�� ಎತ್ತಿಕೊಂಡು ಹೋಗುತ್ತಾರೆಂದು ಭಿಲ್ಲರ ರಾಜ ಉಪೇಂದ್ರ ಪುರುಕುತ್ಸಾನಿಯ ಬಳಿ ವಿವರಿಸುತ್ತಾನೆ. ಅಯೋಧ್ಯೆಯ ದೃಷ್ಟಿಯಿಂದ ಭಿಲ್ಲರನ್ನು ಒಲಿಸಿಕೊಳ್ಳಲು ೧೪ ಗುಂಪು ಮಾಡಿ, ಆಕೆ ಹೇಳಿದ ಅಡವಿಯಲ್ಲಿ ಕುಟುಂಬ ಸಮೇತ ವಾಸಿಸಲು ನೆರವಾಗಿ, ಜೇನು ಸಾಕಿ, ಹಣ್ಣು ಮಾರಿ, ಜೀವನ ಸಾಗಿಸಬೇಕೆಂದು, ಕೊಲೆ ಸುಲಿಗೆ ಬಿಟ್ಟು ಬಿಡಬೇಕೆಂದು, ರಾಜಾಜ್ಞೆಯಾದಾಗ ಯುದ್ಧಕ್ಕೆ ಬರಬೇಕೆಂದು ಶರತ್ತು ಹಾಕುತ್ತಾಳೆ. ಶ್ರಾವಸ್ತಿಯವರಿಂದ ತಪ್ಪಿಸಿಕೊಳ್ಳುಲು ಬಿಲ್ಲರು ರಾಣಿಯ ಮಾತಿಗೆ ಒಪ್ಪುತ್ತಾರೆ. ಅತ್ತ ಶ್ರಾವಸ್ತಿಯವರ ಜೊತೆ ಮೈತ್ರಿ, ಬಿಲ್ಲರ ಜೊತೆ ಮೈತ್ರಿ ಬೆಳೆಸುತ್ತಾಳೆ. ಒಮ್ಮೆ ಪುರುಕುತ್ಸನ ಆರೋಗ್ಯ ಕೆಟ್ಟಾಗ ದೇವದೇಮರ ಹಾಗು ಸಿಂಹಭಟ್ಟರ ನೇತೃತ್ವದಲ್ಲಿ ಶತಚಂಡಿಯಾಗವನ್ನು ನೆರವೆೇರಿಸುತ್ತಾಳೆ, ಇದರಿಂದ ರಾಜನು ಚೇತರಿಸಿಕೊಳ್ಳುತ್ತಾನೆ.
ಭಾಗ -೨ : ಭದ್ರಾಯು: ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು, ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ, ಆಕೆಗೆ ಮಕ್ಕಳಾಗಲಿಲ್ಲವೆಂದು ಅನಾಥ ಬಾಲಿಕೆ ಯಾದವಿಯನ್ನು ಮದುವೆಯಾಗುತ್ತಾನೆ. ಯಾದವಿ ಗರ್ಭವತಿಯಾದಾಗ ಕೇಶಿನಿ ಆಕೆಗೆ ವಿಷಪ್ರಾಸನ ಮಾಡುತ್ತಾಳೆ, ಋಷಭದೇವ ಮಹಾಮುನಿಗಳ ಔಷಧದಿಂದ ಅದೃಷ್ಟವಶಾತ್ ಗರ್ಭಪಾತದಿಂದ ಯಾದವಿ ಪಾರಾಗುತ್ತಾಳೆ ಆದರೆ ಹುಟ್ಟಿದ ಶಿಶುವಿಗೆ ಕೈಗಳಿಲ್ಲ, ಪಾದಗಳಿಲ್ಲ, ಕೈ ಇರುವ ಜಾಗದಲ್ಲಿ ಒಂದೇ ಗಣಲಿನ ಭುಜವಿರುತ್ತದೆ, ಊನ ಶಿಶು ಕಂಡು ಯಾದವಿ ಸಾಯಲು ಸಿದ್ಧಳಾಗುತ್ತಾಳೆ, ಆದರೆ ಋಷಭದೇವನು ಶಿಶುವಿನ ಜಾತಕ ನೋಡಿ ಚಕ್ರವರ್ತಿಯಾಗುತ್ತಾನೆಂದು ಹೇಳಿದಾಗ ಸಮಾಧಾನವಾಗುತ್ತದೆ. ಕೇಶಿನಿ ರಾಜ್ಯಾಡಳಿತ ಮಾಡುವುದನ್ನು ಆಕೆಯ ತಮ್ಮ ದುರ್ಗಸಿಂಹ ಸಹಿಸಲಾರ ಸೇಡು ತೀರಿಸಿಕೊಳ್ಳಲು ಕಾಯುತ್ತಾನೆ. ಇದೇ ಸಮಯದಲ್ಲಿ ಶಬರರು ದಾಶಾರ್ಣದ ಮೇಲೆ ದಾಳಿ ಮಾಡುತ್ತಾರೆ, ಅವರ ಪಡೆಗೆ ದುರ್ಗಸಿಂಹ ಸೇರುತ್ತಾನೆ. ಕೇಶಿನೀದೇವಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಪರಾರಿಯಾಗುತ್ತಾಳೆ, ಆದರೆ ಭದ್ರಾಯು ಪಾಂಚಾಲ ರಾಜ್ಯದ ಮೇಲೆ ದಾಳಿ ಮಾಡಿ ಆಕ್ರಮಿಸಿ ಕುರುಪಾಂಚಾಲ ಸಾಮ್ರಾಜ್ಯವನ್ನು ಕಟ್ಟಿ ಮಾಹಿಷ್ಮತಿಯನ್ನು ಆಕ್ರಮಣ ಮಾಡುತ್ತಾನೆ. ಭದ್ರಾಯುವೆ ನಂತರ *ಸಗರ* ಎಂದು ಪ್ರಸಿದ್ಧಿ ಹೊಂದುತ್ತಾನೆ. *ನಂತರ ಸಗರನ ಕಣ್ಣು ಅಯೋಧ್ಯೆಯ ಮೇಲೆ ಬೀಳುತ್ತದೆ, ಅಯೋಧ್ಯೆಯನ್ನು ಆಕ್ರಮಣ ಮಾಡಲು ಹೊರಟ ಶಬರರು ಪುರುಕುತ್ಸಾನಿಯ, ತಾರ್ಕ್ಷನ ಚಾಣಾಕ್ಷತೆಯಿಂದ ಅಯೋಧ್ಯೆಯನ್ನು ಗೆಲ್ಲಲಾರದೆ ಪುರುಕುತ್ಸನಿದ್ದ ಆಮ್ರವನಕ್ಕೆ ಮುತ್ತಿಗೆ ಹಾಕಿ ಪುರುಕುತ್ಸನನ್ನು ಅಪಹರಿಸಿಕೊಂಡು ಹೋಗುತ್ತಾರೆ. ಅಯೋಧ್ಯೆಯನ್ನು ಗೆಲ್ಲದಿದ್ದರೂ ರಾಜನನ್ನು ಬಂಧಿಸಿದಷ್ಟೇ ಸಗರನಿಗೆ ಸಮಾಧಾನ.*
ಭಾಗ-೩: ತ್ರಸದಸ್ಯು ಪುರುಕುತ್ಸನಿಂದ ಸಂತಾನ ಪ್ರಾಪ್ತವಾಗದೆ ಪುರುಕುತ್ಸಾನಿ ಶತಚಂಡಿಯಾಗದ ಸಮಯದಲ್ಲಿ ಸಿಂಹಭಟ್ಟನ ರೂಪ ಲಾವಣ್ಯಗಳಿಗೆ ಮಾರುಹೋಗಿ ಆತನಿಂದ ಸುಖ ಪಡೆದು ಗರ್ಭವತಿಯಾಗಿ ತ್ರಸದಸ್ಯುವಿಗೆ ಜನ್ಮ ನೀಡುತ್ತಾಳೆ, ಆದರೆ ಇದು ಗುಟ್ಟಾಗಿರುತ್ತದೆ, ತ್ರಸದಸ್ಯು ಪುರುಕುತ್ಸನ ಮಗನೆಂದೆ ಆತನು ಪಟ್ಟಕ್ಕೇರುತ್ತಾನೆ. ತಾರ್ಕ್ಷನಿಂದಲೇ ತ್ರಸದಸ್ಯು ಹಲವಾರು ವಿದ್ಯೆಗಳನ್ನು ಕಲಿತುಕೊಳ್ಳುತ್ತಾನೆ, ತಾರ್ಕ್ಷನೆ ಗುರುವಾಗುತ್ತಾನೆ. ಇದೇ ಸಮಯದಲ್ಲಿ ಪಶ್ಚಿಮದತ್ತ ಲಕ್ಷಕೊಟ್ಟ ರಾಣಿಯು ಪೂರ್ವದಿಂದ ಕಾಶೀರಾಜನು ಅಯೋಧ್ಯೆಯನ್ನು ಮುತ್ತಿಗೆ ಹಾಕಲು ಬರುವುದನ್ನು ತಿಳಿದು ಭಿಲ್ಲರ ನಾಯಕ ಕಾಲಿಯನ ನೇತೃತ್ವದಲ್ಲಿ ಉತ್ತರ ಕೋಸಲದಿಂದ ಕಾಶೀರಾಜನನ್ನು ತಡೆಗಟ್ಟಳು ಆಜ್ಞೆ ಮಾಡಿ ಹಾಗು ತಾರ್ಕ್ಷನ ನೇತೃತ್ವದಲ್ಲಿ ಕಾಶೀರಾಜನನ್ನು ತಡೆದು ಕಾಶಿ ಸೈನ್ಯವನ್ನು ಹಿಮ್ಮೆಟ್ಟಿಸಿದ ಪ್ರಸಂಗ ಅತ್ಯದ್ಭುತ. ಸಗರನು ಮರಣಾನಂತರ ರುಕ್ಮಾಂಗದ ಪಟ್ಟಕ್ಕೆ ಬರುತ್ತಾನೆ, ಆದರೆ ಅಯೋಧ್ಯೆ ಕಾಶಿ ಶ್ರಾವಸ್ತಿಗಳನ್ನು ಸೋಲಿಸಿದ ಸುದ್ಧಿ ಅರಗಿಸಿಕೊಳ್ಳಲಾಗಲಿಲ್ಲ. ಅಂತೂ ಪುರುಕುತ್ಸಾನಿಯ ಚಾಣಾಕ್ಷತೆಯಿಂದ ಅಯೋಧ್ಯೆಯನ್ನು ರುಕ್ಮಾಂಗದನಿಂದ ಹಾಗು ನೇಪಾಳ ರಾಜ ತ್ರಿಲೋಕಸಿಂಹನಿಂದ ಪಾರುಮಾಡುವ ಪ್ರಸಂಗವೂ ಅತ್ಯದ್ಭುತ. ಒಟ್ಟಾರೆ ಶ್ರಾವಸ್ತಿ, ಗಯಾ, ಕಾಶಿ, ಕಾಮಾಖ್ಯ ಇವರುಗಳ ಜೊತೆ ಸ್ನೇಹದಿಂದಿರುತ್ತಾಳೆ. ರುಕ್ಮಾಂಗದ ವಿವಾಹ ಸಮಯದಲ್ಲಿ ಪುರುಕುತ್ಸನನ್ನು ಕಳ್ಳನು ಚೂರಿಯಿಂದ ಕೊಲ್ಲುತ್ತಾನೆ, ಆ ಕಳ್ಳನಾರೆಂದು ನಂತರ ಭಾಗದಲ್ಲಿ ತಿಳಿದಾಗ ಆಶ್ಚರ್ಯವಾಗುತ್ತದೆ.
ತ್ರಸದಸ್ಯು ೧೯ ವರ್ಷದವನಿದ್ದಾಗ ರಾಣಿ ಆಮ್ರವನವನ್ನು ಸೇರುತ್ತಾಳೆ. ಚಿಕ್ಕ ಬಾಲಕನ ಮೇಲೆ ವೃಷಭಟ್ಟ ರಥ ಓಡಿಸಿದರಿಂದ ರಥ ಒಡಿಸಲು ಕೊಟ್ಟ ತ್ರಸದಸ್ಯು ಹಾಗು ವೃಷಭಟ್ಟರಲ್ಲಿ ದ್ವೇಷ ಅಸೂಹೆ ಬೆಳೆದು, ನ್ಯಾಯ ಒದಗಿಸಿಕೊಡಲು ಕಾಶಿಯಿಂದ ಕೇತುಮಂತ ಬಂದು ತ್ರಸದಸ್ಯುವಿಗೆ ನ್ಯಾಯ ಒದಗಿಸುತ್ತಾನೆ. ವೃಷಭಟ್ಟನಿಗೆ ತ್ರಸದಸ್ಯು ಸಿಂಹಭಟ್ಟನ ಮಗನೆಂದು ತಿಳಿದಿರುತ್ತದೆ. ಈ ಸುದ್ಧಿ ವೃಷಭಟ್ಟನಿಂದ ತನ್ನ ತಂದೆ ಭೀಮಭಟ್ಟನಿಗೆ ತಿಳಿದು ಜನರ ನಿಂದನೆಗಳಿಗೆ ತ್ರಸದಸ್ಯು ಪಾತ್ರನಾಗುತ್ತಾನೆ. ಅವರ ನಿಂದನೆಯಿಂದ ಹಾಗು ಕೇತುಮಂತನು ನ್ಯಾಯ ಒದಗಿಸಿ ಪಾರಾಗುವುದೇ ಇತರ ಅಧ್ಯಾಯದ ಕಥೆ.